Sunday, 26 February 2012

ನನ್ನ ಒಲವಿಗಾಗಿ

ಒಲವೇ ನಿನ್ನ ಕಂಡ  ಕ್ಷಣದಲ್ಲಿ ನನ್ನ ಮನಸ್ಸು ಕುಣಿಯಿತು
ಈ ಆನಂದವ  ವ್ಯಕ್ತ ಪಡಿಸಿತು ನನ್ನ ಕಣ್ಣುಗಳು
ಮೆಚ್ಚುಗೆಯ ಭಾವನೆಯಿಂದ ಕೂಡಿತ್ತು ಆ ನಿನ್ನ ಕಣ್ಣಿನ ನೋಟವು
ಮಾತಿಗಿಂತ ಹೆಚ್ಚು ಕಣ್ಣುಗಳ ಮಿಲನವೇ ಅಲ್ಲಿ ಹೆಚ್ಚಿತ್ತು.

ಒಲವೇ ನಿನ್ನ ಜೊತೆಯ ಒಡನಾಟದಿಂದ ತುಂಬಿ ಬಂತು ಮನವು
ನನ್ನ ಮೊಗದಲ್ಲಿ ನಿನ್ನ ಪ್ರೀತಿಯೇ ತುಂಬಿತ್ತು ನಗುವಾಗಿ
ನನ್ನ ಮೌನದ ಸಂಕೇತ ನನ್ನ ನಗುವಿನ ಸಂಕೇತ
ಎಲ್ಲವು ಹೇಳುತ್ತಿತ್ತು ನಿನ್ನ ಮೇಲಿನ ಪ್ರೀತಿಯನ್ನು ಹಿತವಾಗಿ

ಒಲವ ಜೊತೆಗಿನ ಸಂಭಾಷಣೆಯಿಂದ  ಮನವು ಅನಂದದಿಂದಿತ್ತು
ದೇವರ ದರ್ಶನದ ಸೌಭಾಗ್ಯ ದೊರಕಿತ್ತು
ರಾಧಾ ಕೃಷ್ಣರವರ  ಒಲವು ಎಲ್ಲಕ್ಕಿಂತ ಅಮೂಲ್ಯವಾದದ್ದು,ಸಾವಿಲ್ಲದ್ದು, ಮರೆಯಾಗಲಾರದ್ದು
ಪ್ರತಿ ಜನುಮದಲ್ಲೂ ಈ ಒಲವಿಗಾಗಿಯೇ ಕಾಯುವಂತಹ ಮನಸ್ಸು ನನ್ನದು.

 



 






   



 








 






  
 



  



















 















ಆಫೀಸಿನಲ್ಲಿ ತಿಳಿಸದೇ ನೀಡಿದ ಟೆಸ್ಟ್


ಇವತ್ತು ಮೀಟಿಂಗ್ ೧೧.೩೦ ಗೆ ಎಲ್ಲರು ಬರಬೇಕು ಅಂತ ಇಮೇಲ್ ಬಂತು,ನಾವು ೫ ನಿಮಿಷ ಮುಂಚೆನೇ ಹೋದ್ವಿ
ಹೋದ ಕ್ಷಣವೇ ಮ್ಯಾನೇಜರ್  ಟೆಸ್ಟ್ಗೆ ತಯಾರು ಆಗಿದ್ದಿರ ಅಂತ,ನಾನು ಜೋಕ್ಸ್ ಮಾಡ್ತಾ ಇದ್ದಾರೆ ಅಂತ ಸುಮ್ಮನೆ ಆದೆ.
ಪೇಪರ್ , ಪೆನ್ನು  ಹಂಚಿದರು ಎಲ್ಲ ಮುಖ ಮುಖ ನೋಡಿಕೊಳ್ತಾ ಇದ್ದಾರೆ .ಪ್ರಶ್ನೆ ಪತ್ರಿಕೆ  ಕೊಟ್ಟರು ೧೦ ಪ್ರಶ್ನೆ ಇತ್ತು.


ಸರಿ ಬರೆಯೋಣ ಅಂತ ಸ್ಟಾರ್ಟ್ ಮಾಡಿದೆ ಬರೆದೆ, ಬರೆದೆ, ಬರಿತಾನೆ ಇದ್ದೆ. ಇ ಪ್ರಾಜೆಕ್ಟ್ನಲ್ಲಿ ಮೊದಲ ಟೆಸ್ಟ್, ಇದು ನನ್ನ "ಕಾರ್ಯ ನಿರ್ವಹಣೆ" ಬಗ್ಗೆ ತಿಳಿಸುವ ಟೆಸ್ಟ್,ಆದ್ದರಿಂದ ಸ್ವಲ್ಪ ಭಯ. ಸರಿ ಹೇಗೋ ಏನೋ ಬರೆದೆ.
ಟೆಸ್ಟ್ ಹಾಲ್ ನಲ್ಲಿ ೩ ಮಂದಿ  ಲೇಟ್ ಬಂದ್ರು , ಬಂದ ತಕ್ಷಣ ಮ್ಯಾನೇಜರ್ ಟೆಸ್ಟ್ ಪೇಪರ್ ತಗೊಳ್ಳಿ ಇದೆ ಪ್ರಶ್ನೆಗಳು
೧ ಗಂಟೆ ಮಾತ್ರ ಟೈಮ್ ಅಂದ್ರು. surprise ಟೆಸ್ಟ್ ಆಗಿದ್ದರಿಂದ ಅವ್ರ ಮುಖ ನೋಡಬೇಕಿತ್ತು. ಫುಲ್ ಗಾಬರಿ.
೧೫ ನಿಮಿಶ್ ಲೇಟ್ ಆಗಿ ಬಂದಿದ್ದರಿಂದ , ೧೫ ನಿಮಿಶ್ ಹೆಚ್ಚು ಸಮಯ ತಗೊಂಡರು.

ಸ್ಮಾರ್ಟ್  ಮೀಟರ್ಸ್ ನಲ್ಲಿ , ಯಾವ  ಕಮ್ಮುನಿಕೆಶನ್ ಪ್ರೊಟುಕ್ಯಾಲ್ಲ್ಸ್ ಉಪಯೋಗ ಮಾಡ್ತಾರೆ ಅಂತ ಒಂದು ಪ್ರಶ್ನೆ.
ಅಲ್ಲಿ ಒಬ್ಬರು ಎದ್ದು ನನಗೆ ಡೌಟ್ ಇದೆ ಕಮ್ಮುನಿಕೆಶನ್ ಪ್ರೊಟುಕ್ಯಾಲ್ಲ್ಸ್ ರಫ್ ,ಗಿಪಿರ್ ಸ್ ಇವೆ ತಾನೇ ಅಂತ ಟೆಸ್ಟ್ ಹಾಲಿನಲ್ಲಿ
ಜೋರಾಗಿ ಕೇಳಿದ್ರು ಅದಕೆ ಎಲ್ಲರು  ಜೋರಾಗಿ ಗೊಳ್ ಅಂತ ನಕ್ಕಿದ್ರು. ಒಂಥರಾ ಎಲ್ಲ ಎಂಜಾಯ್  ಮಾಡ್ತಾ ಇದ್ದಹಂಗೆ
ಇತ್ತು. 

ಭಯ ಅಂದ್ರೆ ರಿಸಲ್ಟ್ ದೇ.ಎಲ್ಲರ ಮುಂದೆ ಮಾರ್ಕ್ಸ್ ಹೇಳಿದ್ರೆ ಅವಮಾನ ,ನೆನಪಿಸಿಕೊಂಡರೆ ದಿಗಿಲು.
ಅಂತು ಇಂತು ಟೆಸ್ಟ್ ಮುಗಿಸಿ ನಮ್ಮ ಜಾಗಕ್ಕೆ ಬಂದ್ವಿ .ಬಂದಿದ್ದೆ ತಡ ಎಲ್ಲ ಉತ್ತರ ಹುಡುಕೋಕೆ ಶುರು.
ಈ ಪ್ರಶ್ನೆಗೆ ಏನು ಉತ್ತರ?, ನಾನು ಹಿಂಗೆ ಉತ್ತರ ಬರೆದೆ ಕರೆಕ್ಟ್ ? ನಾನು ಕಥೆ ಬರದೆ.....ಹೇಗೆ ಎಲ್ಲರದು ಸಂಭಾಷಣೆ ನಡಿತ್ತಾನೆ ಇತ್ತು.

ಈ ಟೆಸ್ಟ್ ನಲ್ಲಿ ಬರೋ ಮಾರ್ಕ್ಸ್ ಪ್ರಕಾರ ಪ್ರಾಜೆಕ್ಟ್ ಕೊಡ್ತಾರೆ.. ಇಲ್ಲಂದ್ರೆ ಮತ್ತೆ ಟೆಸ್ಟ್ ಬರೆಯೋಕೆ ಹೇಳ್ತಾರೆ...
ಇದು ನಮ್ಮ ಸಾಮರ್ಥ್ಯ ತೋರಿಸುತ್ತೆ.....  "ಫಸ್ಟ್ ಇಂಪ್ರೆಶನ್ ಇಸ್ ದಿ ಬೆಸ್ಟ್ ಇಂಪ್ರೆಶನ್" ..... ಇಂಗೆ ಎಲ್ಲ ಅವರವರಿಗೆ
ತೋಚಿದನ್ನ ಮಾತಾಡ್ತಾ  ಇದ್ವಿ.

  ಇದೆಲ್ಲ ನಮ್ಮ ಸ್ಕೂಲ್, ಕಾಲೇಜ್ ದಿನಗಳನ್ನು ನೆನಪು ಮಾಡಿಸಿತ್ತು.ನಾನು ಇಂಜಿನಿಯರಿಂಗ್ ಓದಬೇಕಾದರೆ
 ಇಂಟರ್ನಲ್ಸ್ ನಲ್ಲಿ (ಟೆಸ್ಟ್) ಕೊಡುತ್ತಿದ್ರು ....೨೦ ಪ್ರಶ್ನೆ ಮುಂಚೆನೇ ಕೊಟ್ಟು ಇದರಲ್ಲಿ ೧೦ ಪ್ರಶ್ನೆ ಇಂಟರ್ನಲ್ಸ್ ಗೆ ಬರುತ್ತೆ ಅಂತ ಹೇಳ್ತಾ ಇದ್ದರು. ಭೂತ ಕಾಲದ ನೆನಪುಗಳು ಮರುಕಳಿಸಿದವು.






 













 



 














  



 












 
 


 

 




  





 
 
 

 



  















 
 


Wednesday, 22 February 2012

Kavana

 ಕವನ

ನೀನು ದೂರ ಇದ್ದರೇನಂತೆ  ನಿನ್ನ ನೆನಪುಗಳು ಸಾಕು ಬದುಕಲು
ನಿನ್ನ ಒಲವು ಬೇಕು ನಾನು ಜೀವಂತವಾಗಿ ಜೀವಿಸಲು
ನಿನ್ನ ಆದರ್ಶಗಳು ಬೇಕು ಜೀವನದಲ್ಲಿ ನಾನು ಸಮರ್ಪಕವಾಗಿ ಬಾಳಲು
ನಿನ್ನ ಸಹಕಾರ,ಸಹಬಾಳ್ವೆ ಬೇಕು ನನ್ನ ಬದುಕು ಯಶಸ್ವಿಯಾಗಲು


 









 

Monday, 20 February 2012


ಛಲವು ದೂರ ಆದರು ಬದುಕು ಬೇಡವೆನಿಸಿದರು
ಪ್ರೀತಿಯ ಹಂಬಲವು ಕಾಡ  ತೊಡಗಿದರು
ಪ್ರತಿ ಕ್ಷಣ ಧ್ಯೇಯವೆ ಮುಖ್ಯವಾಗುತ್ತದೆ
ಮನವು ಬೇರೆಲ್ಲ ವಿಷಯವನ್ನು ಮೆಲ್ಲನೆ ಮರೆಯುತ್ತದೆ
 






  
 



ಕಷ್ಟಗಳೇ   ಇರಲಿ ನಷ್ಟಗಳೇ  ಇರಲಿ ಧೇಯ ಮುಖ್ಯವಾಗಲಿ
ನೋವಿರಲಿ ನಲಿವಿರಲಿ ನಿನ್ನ ಗುರಿ ತಲುಪಲು ಸದಾ ಮನವು ಸಿದ್ದವಾಗಿರಲಿ
ಹಸಿವು ಇರಲಿ ಇಲ್ಲದಿರಲಿ ಬಾಳಿನ ಯಶಸ್ವಿ ಕಡೆ ಗಮನವಿರಲಿ
ಹೊಗಳಿಕೆ ಇರಲಿ ನಿಂದನೆ ಇರಲಿ ನಿನ್ನ ದಾರಿಯಲ್ಲಿ ಸದಾ
ಜ್ಞಾನದ ಬೆಳಕು ಚೆಲ್ಲಿರಲಿ
  


 
 

 
ಎಷ್ಟೇ ವಯಸ್ಸಾದರೂ ಬಿಡುವುದ್ಹಿಲ್ಲ ಹಟವನ್ನು
ಎಷ್ಟೇ ಕಷ್ಟ ಬಂದರು ಬಿಡುವುದ್ಹಿಲ್ಲ ಚಟವನ್ನು
 ಎಷ್ಟೇ ಜನ್ಮ ಎತ್ತಿ ಬಂದರು ಬಿಡುವುದ್ಹಿಲ್ಲ ಅಹಮ್ಮನ್ನು
ಪ್ರೀತಿಯಿಂದ ಬೆರೆತು ಬಾಳುವುದನ್ನು ಕಲಿಯಲೇ ಇಲ್ಲ ಜೀವನದ  ಕೊನೆ ಕ್ಷಣಗಳಲ್ಲಿನ್ನು

\



 


 










 


  ಬಂಗಾರ ಯಾಕೆ ಬೇಕು ನನಗೆ  ಬಂಗಾರದಂಥ ಬಾಳನ್ನು ನೀನು ನೀಡಿದ್ದಿಯ
ತಾಳ್ಮೆ,ಜಾಣ್ಮೆ ಎರಡನ್ನು ನಿನ್ನ ಅಡಿಪಾಯವಾಗಿ ಬಳಸಿಕೊಂಡಿದ್ದಿಯ
ಬೆಲೆ ಕಟ್ಟಲು ಸಾದ್ಯವಿಲ್ಲ ಇ ಬಾಳಿಗೆ, ನಿನ್ನ ಸಮಯವನ್ನ ನನಗಾಗಿ ಮೀಸಲಿಟ್ಟಿದ್ಧಿಯ
ಎಷ್ಟೇ ಕಷ್ಟ ಬಂದರು ಒಲವು, ಸಹಕಾರ ಕೊಟ್ಹಿದ್ದಿಯ



  




 


  
 


 
 
 
 






 

 




 
 






     

 
 


Tuesday, 14 February 2012

ಬರೆಯದೆ ಉಳಿದ ಬರಹಗಳು
ಕನಸಾಗೆ ಉಳಿದ ನನ್ನ ಕವನಗಳು
ಅನಿತಾ ಮುಖಾಂತರ ಹೊರ ಬಂದ
ನನ್ನ ನನಸಾದ  ಕವನಗಳು
  

 
ಅನಿತಾ ,

            ನಾನು ಮತ್ತೆ ಕನ್ನಡದಲ್ಲಿ ಕವನ ಬರೆಯಲು ಪ್ರೇರೇಪಿಸಿದ ನಿಮಗೆ ನನ್ನ ಧನ್ಯವಾದಗಳು.

ಪಲ್ಲವಿ