ಒಲವೇ ನಿನ್ನ ಕಂಡ ಕ್ಷಣದಲ್ಲಿ ನನ್ನ ಮನಸ್ಸು ಕುಣಿಯಿತು
ಈ ಆನಂದವ ವ್ಯಕ್ತ ಪಡಿಸಿತು ನನ್ನ ಕಣ್ಣುಗಳು
ಮೆಚ್ಚುಗೆಯ ಭಾವನೆಯಿಂದ ಕೂಡಿತ್ತು ಆ ನಿನ್ನ ಕಣ್ಣಿನ ನೋಟವು
ಮಾತಿಗಿಂತ ಹೆಚ್ಚು ಕಣ್ಣುಗಳ ಮಿಲನವೇ ಅಲ್ಲಿ ಹೆಚ್ಚಿತ್ತು.
ಒಲವೇ ನಿನ್ನ ಜೊತೆಯ ಒಡನಾಟದಿಂದ ತುಂಬಿ ಬಂತು ಮನವು
ನನ್ನ ಮೊಗದಲ್ಲಿ ನಿನ್ನ ಪ್ರೀತಿಯೇ ತುಂಬಿತ್ತು ನಗುವಾಗಿ
ನನ್ನ ಮೌನದ ಸಂಕೇತ ನನ್ನ ನಗುವಿನ ಸಂಕೇತ
ಎಲ್ಲವು ಹೇಳುತ್ತಿತ್ತು ನಿನ್ನ ಮೇಲಿನ ಪ್ರೀತಿಯನ್ನು ಹಿತವಾಗಿ
ಒಲವ ಜೊತೆಗಿನ ಸಂಭಾಷಣೆಯಿಂದ ಮನವು ಅನಂದದಿಂದಿತ್ತು
ದೇವರ ದರ್ಶನದ ಸೌಭಾಗ್ಯ ದೊರಕಿತ್ತು
ರಾಧಾ ಕೃಷ್ಣರವರ ಒಲವು ಎಲ್ಲಕ್ಕಿಂತ ಅಮೂಲ್ಯವಾದದ್ದು,ಸಾವಿಲ್ಲದ್ದು, ಮರೆಯಾಗಲಾರದ್ದು
ಪ್ರತಿ ಜನುಮದಲ್ಲೂ ಈ ಒಲವಿಗಾಗಿಯೇ ಕಾಯುವಂತಹ ಮನಸ್ಸು ನನ್ನದು.

No comments:
Post a Comment